Friday, May 29, 2009

ಆತ್ಮೀಯ ಪರಶು ,ನಿನ್ನ ಮರೆವಿನ ಲೇಖನಾನುಭವ ಓದಿ ನಾನೊಂದೆರಡು ಹಂಚಿಕೊಳ್ಳೋಣ ಅನ್ನಿಸಿತು ...ನಿನಗಾಗಿರುವ ಈ ಅನುಭವ ಎಲ್ಲರೂ ಒಂದಲ್ಲ ಒಂದು ಸಾರಿ ಅನುಭವಿಸಿ ಮುಜುಗರಕ್ಕೆ ಒಳಗಾಗಿರುತ್ತೇವೆ...ನಿನ್ನ ಲೇಖನದಲ್ಲಿ ಮರೆವು ಅತಿ ದೊಡ್ಡ ದೌರ್ಬಲ್ಯ ಎಂದು ಹೇಳಿರುವುದು ಸತ್ಯ ವಾದರೂ "ಮರೆವು" ಮಾನವನೆಂಬ ಪ್ರಾಣಿಗೆ ದೇವರು ಕೊಟ್ಟ ದೊಡ್ಡ ವರ ಎಂಬುದು ನನ್ನ ಅನಿಸಿಕೆ ಯಾಕೆಂದರೆ ಮನುಷ್ಯನ ಜೀವನದಲ್ಲಿ ನಡೆದುದೆಲ್ಲವೂ ಮನುಷ್ಯ ತನ್ನ ಸ್ಮೃತಿ ಪಟಲದಲ್ಲಿಟ್ಟು ಕೊಳ್ಳುವಂತಿದ್ದರೆ ಮಾನವರೆಲ್ಲ ಮಾನವರಗಿರಲು ಸಾದ್ಯವಿಲ್ಲ ....ತನ್ನ ಜೀವನದಲ್ಲಿ ನಡೆದ ಎಲ್ಲ ದುಃಖಕರ ಅನುಭವವೆಲ್ಲ ತನ್ನ ನೆನಪಿನಲ್ಲಿ ಉಳಿಯುವನ್ತಿದ್ದರೆ ಅವನ ಸ್ಥಿತಿ ಉಹಿಸಲಾಸದ್ಯ...ಅವನು ಬಹುಬೇಗ ತನ್ನ ಪ್ರೀತಿ ಪಾತ್ರರ ಸಾವಿನಿಂದ ಅದ ಆಘಾತವನ್ನು ಕ್ರಮೇಣ ಮರೆಯುತ್ತಾನೆ ..ಅದರ ತೀವ್ರತೆ ದಿನದಿನಕ್ಕೂ ಕಡಿಮೆಯಾಗುತ್ತದೆ ...ಪ್ರಿಯತಮೆಯಿಂದ ಆದ ಮೋಸವನ್ನು ಬಹು ಬೇಗ ಅದರ ಹ್ಯಾಂಗ್ ಓವರ್ ನಿಂದ ಹೊರಬರುತ್ತಾನೆ...ಏನೇ ಆಗಲಿ ನಿನ್ನ ಲೇಖನದಲ್ಲಿ ಮನೋವ್ಯಜ್ಞಾನಿಕ ಮತ್ತು ವ್ಯಜ್ಞಾನಿಕವಾಗಿ ಚಿಂತಿಸಿ ಬರೆದಿದ್ದರೆ ಇನ್ನು ಪರಿಣಾಮಕಾರಿಯಾಗಿರುತಿತ್ತು ....

No comments:

Post a Comment